ನೀ ಹೀಂಗ ನೋಡಬ್ಯಾಡ ನನ್ನ

ನೀ ಹೀಂಗ ನೋಡಬ್ಯಾಡ ನನ್ನ - ಹಾಲೋ ಸಾಹಹಾತ್ ಹಾಡುಗಳ ಸಂಗ್ರಹ, ಲೇಖನದಲ್ಲಿ ನೀವು ಶೀರ್ಷಿಕೆಯೊಂದಿಗೆ ಈ ಸಮಯವನ್ನು ಓದಿದ್ದೀರಿ ನೀ ಹೀಂಗ ನೋಡಬ್ಯಾಡ ನನ್ನ, ಈ ಲೇಖನವನ್ನು ನೀವು ಓದಲು ಮತ್ತು ಅದರಲ್ಲಿ ಮಾಹಿತಿಯನ್ನು ಪಡೆಯಲು ನಾವು ಸಿದ್ಧಪಡಿಸಿದ್ದೇವೆ. ಆಶಾದಾಯಕವಾಗಿ ಪೋಸ್ಟ್ ವಿಷಯಗಳು ಲೇಖನಗಳು ಎಂ.ರಂಗರಾವ್, ಲೇಖನಗಳು ದ.ರಾ.ಬೇಂದ್ರೆ, ಲೇಖನಗಳು ಭಾವ ಗೀತೆ, ಇದು ನಿಮಗೆ ಅರ್ಥವಾಗುವಂತೆ ನಾವು ಬರೆಯುತ್ತೇವೆ. ಸರಿ, ಸಂತೋಷದ ಓದುವಿಕೆ.



ಶೀರ್ಷಿಕೆ : ನೀ ಹೀಂಗ ನೋಡಬ್ಯಾಡ ನನ್ನ
ಲಿಂಕ್ : ನೀ ಹೀಂಗ ನೋಡಬ್ಯಾಡ ನನ್ನ

ಸಹ ಓದಿ


ನೀ ಹೀಂಗ ನೋಡಬ್ಯಾಡ ನನ್ನ

ರಚನೆ : ಡಾ.ದ.ರಾ.ಬೇಂದ್ರೆ
ಸಂಗೀತ: ಎಂ.ರಂಗರಾವ್
ಹಿನ್ನಲೆ ಗಾಯನ: ರಾಜಕುಮಾರ್ ಭಾರತಿ


ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ

ದಾರೀಲಿ ನೆನೆದ ಕೈ ಹಿಡಿದೆ ನೀನು ತಣ್ಣsಗ ಅಂತ ತಿಳಿದು
ಬಿಡವೊಲ್ಲಿ ಇನ್ನುನೂ ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲಿನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ ನಾನು ದೇವರಂತ ತಿಳಿದಿಯೇನ ನೀ ನನ್ನ

ನೀ ಹೀಂಗ ನೋಡಬ್ಯಾಡ ನನ್ನ...

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಾoಟಿಯಾ ಹಣ್ಣು
ಹೊಳೆ ಹೊಳೆವ ಹಾಂಗಿರುವ ಕಣ್ಣಿರುವ ಹೆಣ್ಣ ಹೇಳು ನಿನ್ನವೇನ ಈ ಕಣ್ಣು
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ
ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ

ನೀ ಹೀಂಗ ನೋಡಬ್ಯಾಡ ನನ್ನ...

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು ನಡ ನಡಕ ಹುಚ್ಚನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡದ್ಹಾಂಗೆ ಗಾಳಿಯ ನೆವಕ
ಅತ್ತಾರೆ ಅತ್ತುಬಿಡು ಹೊನಲು ಬರಲಿ ನಕ್ಯಾಕೆ ಮರಸತೀ ದು:ಖ
ಎವೆಬಡಿಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿಕಚ್ಚಿ ಹಿಡಿಯದಿರು ಬಿಕ್ಕ

ನೀ ಹೀಂಗ ನೋಡಬ್ಯಾಡ ನನ್ನ...


ಅಂತಹ ಲೇಖನ ನೀ ಹೀಂಗ ನೋಡಬ್ಯಾಡ ನನ್ನ

ಅದು ಒಂದು ಲೇಖನನೀ ಹೀಂಗ ನೋಡಬ್ಯಾಡ ನನ್ನ ಈ ಸಮಯದಲ್ಲಿ, ಎಲ್ಲರಿಗೂ ಆಶಾದಾಯಕವಾಗಿ ಲಾಭವಾಗುತ್ತದೆ. ಸರಿ, ಪೋಸ್ಟ್ ಮಾಡುವ ಇತರ ಲೇಖನದಲ್ಲಿ ನಿಮ್ಮನ್ನು ನೋಡಿ.


ನೀವು ಈಗ ಲೇಖನವನ್ನು ಓದುತ್ತಿದ್ದೀರಿ ನೀ ಹೀಂಗ ನೋಡಬ್ಯಾಡ ನನ್ನ ಲಿಂಕ್ ವಿಳಾಸದೊಂದಿಗೆ http://tunturunenesu.blogspot.com/2008/08/blog-post.html

Comments

Popular posts from this blog

ಮೋಹದ ಹೆಂಡತಿ ತೀರಿದ ಬಳಿಕ

ಸೋರುತಿಹುದು ಮನೆಯ ಮಾಳಿಗಿ

ನಿನ್ನಾ ರೂಪ ಎದೆಯ ಕಲಕಿ ಕಣ್ಣು ಮಿಂದಾಗ