Posts

Showing posts from May, 2010

ಮುಂಜಾನೆ ಮೂಡಿದ ಹಾಗೆ

ಚಿತ್ರ: ಮುದುಡಿದ ತಾವರೆ ಅರಳಿತು ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಎಂ. ರಂಗರಾವ್ ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮುಂಜಾನೆ ಮೂಡಿದ ಹಾಗೆ ತಂಗಾಳಿ ತೀಡಿದ ಹಾಗೆ ಹೊಂಬಾಳೆ ತೂಗಿದ ಹಾಗೆ ಕೆಂದಾವರೆ ನೀನು ನನಗೆ ಹಸಿರಾದ ಪ್ರೀತಿಯ ಕಂಡು ಉಸಿರಾಗ ಬಂದೆನು ನಾನು ಸವಿಯಾದ ಸ್ನೇಹ ಮೋಹ ಬಲು ಬೆಳೆದು ನಿಂತಿರಲು ಓಡಿ ಬಂದೆ ಬಳಿಗೆ ಮುಂಜಾನೆ ಮೂಡಿದ ಹಾಗೆ... ಹೊಸದಾದ ಆಸೆಯ ತೋರಿ ಶಶಿಯಂತೆ ಬೆಳಗುವೆ ನೀನು ಚೆಲುವಾದ ಬಾಳ ಕಡಲಿನಲಿ ಒಲುಮೆ ದೋಣಿಯಲಿ ತೇಲು ನನ್ನ ಜೊತೆಗೆ ಮುಂಜಾನೆ ಮೂಡಿದ ಹಾಗೆ...

ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ

ಚಿತ್ರ: ಅನುಪಮ ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಅಶ್ವಥ್ ಮತ್ತು ವೈದಿ ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ ರಾಗ ತಾನ ಪ್ರೇಮಗಾನ ಸಂಜೀವನ ಮಮತೆ ಮೀಟಿ ಮಿಲನ ಕಂಡೇ ನಿನ್ನ ಸ್ನೇಹ ಸೌಭಾಗ್ಯ ಮಿಂದೇ ಹರೆಯಾ ತೂಗಿ ಸನಿಹಾ ಬಂದೇ ಎಲ್ಲ ಪ್ರೀತಿ ಸನ್ಮೋಹ ತಂದೇ ಹರುಷಾ ತಂದಾ ಹಾದಿಯೆ ಚಂದಾ ಒಲವಿನಾಸರೆ ರೋಮಾಂಚಬಂಧಾ ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ... ಜೊತೆಯಾ ಸೇರೀ ಬರುವೆ ನಾನೂ ನನ್ನ ಬಾಳ ಬಂಗಾರ ನೀನು ಬೆಳಕು ನೀನೂ ಕಿರಣಾ ನಾನೂ ನಿನ್ನ ಕೂಡಿ ಹೊಂಬಿಸಿಲ ಬಾನು ನಿನಗೇ ನಾನು ನನಗೆ ನೀನು ನಿನಗೇ ನಾನು ನನಗೆ ನೀನು ಪ್ರೇಮ ಜೀವನ ಎಂದೆಂದು ಜೇನು ಒಲುಮೇ ಪೂಜೆಗೆಂದೆ ಕರೆಯಾ ಕೇಳಿ ಬಂದೆ...

ನಿನ್ನಾ ರೂಪ ಎದೆಯ ಕಲಕಿ ಕಣ್ಣು ಮಿಂದಾಗ

ಚಿತ್ರ : ಪರಸಂಗದ ಗೆಂಡೆತಿಮ್ಮ ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ರಾಜನ್-ನಾಗೇಂದ್ರ ಹಿನ್ನಲೆ ಗಾಯನ: ಎಸ್.ಜಾನಕಿ ನಿನ್ನಾ ರೂಪ ಎದೆಯ ಕಲಕಿ ಕಣ್ಣು ಮಿಂದಾಗ ನಿನ್ನಾ ನೋಟ ಕೂಡಿದಾಗ ಕಂಡೆ ಅನುರಾಗ ಮನಸಿನ ಚಿಲುಮೆಯಾಗೆ ಮುಗಿಯದಾಸೆ ಚಿಮ್ಮೈತೆ ಹೃದಯದ ಕುಲುಮೆಯಾಗೆ ನೂರು ಬಯಕೆ ಸಿಡಿದೈತೆ ನಿನ್ನ ಕಾಣುವ ಬಾವ ಬೆಳೆದು ನನ್ನ ಕನಸು ಕಡೆದೈತೆ ನಿನ್ನಾ ರೂಪ ಎದೆಯ ಕಲಕಿ ಕಣ್ಣು ಮಿಂದಾಗ... ತೆರೆಯದ ಬಯಕೆ ಬಾನು ದೂರ ದೂರ ಸರಿದೈತೆ ಹರೆಯದ ಹಂಬಲ ಗಂಗೆ ಬಾಗಿ ಬಳುಕಿ ಹರಿದೈತೆ ನಿನ್ನ ಸ್ನೇಹಕೆ ಬಾಳು ನಲಿದು ಆಸೆ ಗಂಧ ಹರಡೈತೆ ನಿನ್ನಾ ರೂಪ ಎದೆಯ ಕಲಕಿ ಕಣ್ಣು ಮಿಂದಾಗ... ಮರೆಯದ ಮೋಹ ಉಕ್ಕಿ ತೇಲಿ ತೇಲಿ ಮೊರೆದೈತೆ ಇಂಗದ ದಾಹ ಬೇಗೆ ಕಾದೂ ಕಾದೂ ಕರೆದೈತೆ ನಿನ್ನ ಸೇರುವ ರಾಗ ರಂಗಿಗೆ ನನ್ನ ಮನಸು ತೆರೆದೈತೆ ನಿನ್ನಾ ರೂಪ ಎದೆಯ ಕಲಕಿ ಕಣ್ಣು ಮಿಂದಾಗ..

ಓ ಗುಣವಂತ ಓ ಗುಣವಂತ

ಚಿತ್ರ: ಮಸಣದ ಹೂವು ಸಾಹಿತ್ಯ: ವಿಜಯನಾರಸಿಂಹ ಸಂಗೀತ : ವಿಜಯಭಾಸ್ಕರ ಹಿನ್ನಲೆ ಗಾಯನ : ಎಸ್.ಜಾನಕಿ ಓ ಗುಣವಂತ ಓ ಗುಣವಂತ ನಿನ್ನಾ ಗುಣಗಾನ ಮಾಡಲು ಪದಗಳೇ ಸಿಗುತ್ತಿಲ್ಲಾ ಪದಗಳೇ ಸಿಗುತ್ತಿಲ್ಲ ದಾರಿದೀಪ ತೋರುತಾ, ತೋರುತಾ ಕರುಣೆ ಕಿರಣ ಬೀರುತಾ, ಬೀರುತಾ ಬಂದೆ ನೀನು ಓ ಸ್ನೇಹಿತ, ಸ್ನೇಹಿತ ನನ್ನ ಬಾಳು ಬೆಳಗಿದೆ, ಬೆಳಗಿದೆ ಓ ಗುಣವಂತ ಓ ಗುಣವಂತ... ಹೃದಯ ನಿನಗೆ ಸೋತಿದೆ, ಸೋತಿದೆ ನುಡಿಗೆ ನಾಲಿಗೆ ನಾಚಿದೆ, ನಾಚಿದೆ ಬಗೆಬಗೆ ಭಾವ ಮೂಡಿದೆ, ಮೂಡಿದೆ ಮನವು ನಿನ್ನೇ ಹೊಗಳಿದೆ, ಹೊಗಳಿದೆ ಓ ಗುಣವಂತ ಓ ಗುಣವಂತ... ಪ್ರೇಮದಾಸೆ ತೋರಲಾರೆ, ತೋರಲಾರೆ ಪ್ರಣಯ ಲೀಲೆ ಆಡಲಾರೆ, ಆಡಲಾರೆ ಭಾಷೆಯ ಮೀರಿದೆ ಓ ಭಾವನೆ, ಕಾಮನೆ ಆಸೆಯ ಮೀರಿದೆ ಮೋಹದ ಪ್ರೇರಣೆ ಓ ಗುಣವಂತ ಓ ಗುಣವಂತ

ಅಮ್ಮ ಎಂದರೆ ಏನೋ ಹರುಷವು

ಚಿತ್ರ: ಕಳ್ಳ ಕುಳ್ಳ ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಹಿನ್ನಲೆ ಗಾಯನ: ಡಾ.ಪಿ.ಬಿ.ಶ್ರೀನಿವಾಸ್, ಕೃಷ್ಣಮೂರ್ತಿ ಅಮ್ಮ ಎಂದರೆ ಏನೋ ಹರುಷವು ನಮ್ಮಾ ಪಾಲಿಗೆ ಅವಳೇ ದೈವವು ಅಮ್ಮಾ ಎನ್ನಲೂ ಎಲ್ಲಾ ಮರೆತೆವು ಎಂದೂ ಕಾಣದಾ ಸುಖವಾ ಕಂಡೆವು. ಮೂರು ನದಿಯು ಸೇರಿ ಹರಿದು ಬಂದರೇನು? ಜನರು ಅದರ ರಭಸ ಕಂಡು ಕಡಲು ಎನುವರೇನು? ಕೋಟಿ ದೇವರೆಲ್ಲಾ ಕೂಡಿ ನಿಂತರೇನು ತಾಯಿ ಹಾಗೆ ಪ್ರೀತಿ ತೋರಿ ಸನಿಹ ಬರುವರೇನು ಎಂದೋ ಕನಸಲಿ ಕಂಡಾ ನೆನಪಿದೆ ಇಂದು ನಿನ್ನ ಕಾಣೋ ಆಸೆ ಎದೆಯಾ ತುಂಬಿದೆ ಅಮ್ಮ ಎಂದರೆ ಏನೋ ಹರುಷವು... ನನ್ನೀ ವಯಸು ಮರೆವೆ ಮಗುವೇ ಆಗಿ ಬಿಡುವೆ ಅಮ್ಮ ನಿನ್ನ ಕಂದ ಬಂದೆ ನೋಡು ಎನ್ನುವೆ ನನ್ನೀ ತೋಳಿನಲ್ಲಿ ಅವಳ ಬಳಸಿ ನಲಿವೆ ಇನ್ನೂ ನಿನ್ನ ಎಂದೂ ಬಿಟ್ಟು ಇರೆನು ಎನ್ನುವೆ ತಾಯಿ ಮಡಿಲಲಿ ನಾವು ಹೂಗಳು ನಮ್ಮಾ ಬಾಳೀಗೆ ಅವಳೇ ಕಂಗಳು. ಅಮ್ಮ ಎಂದರೆ ಏನೋ ಹರುಷವು...

ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ

Image
ಚಿತ್ರ: ಕೆರಳಿದ ಸಿಂಹ ಸಂಗೀತ: ಸತ್ಯಂ ಹಿನ್ನಲೆ ಗಾಯನ: ಡಾ. ರಾಜ್ ಕುಮಾರ್, ಡಾ.ಪಿ.ಬಿ.ಶ್ರೀನಿವಾಸ್ ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ ಬಾಳಲೆ ಬೇಕು ಈ ಮನೆ ಬೆಳಕಾಗಿ ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ ಬಾಳಲೆ ಬೇಕು ಈ ಮನೆ ಬೆಳಕಾಗಿ ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ ಬಾಡದ ತಾವರೆ ಹೂವಿನ ಹಾಗೆ ಎಂದಿಗು ಆರದ ಜ್ಯೋತಿಯ ಹಾಗೆ ಗೋಪುರವೇರಿದ ಕಲಶದ ಹಾಗೆ ಆ ಧೃವ ತಾರೆಯೆ ನಾಚುವ ಹಾಗೆ ಜೊತೆಯಲಿ ಎಂದೆಂದು ನೀನಿರಬೇಕು ಬೇರೆ ಏನು ಬೇಡೆವು ನಾವು ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ... ಸಂಜೆಯ ಗಾಳಿಯ ತಂಪಿನ ಹಾಗೆ ಮಲ್ಲಿಗೆ ಹೂವಿನ ಕಂಪಿನ ಹಾಗೆ ಜೀವವ ತುಂಬುವ ಉಸಿರಿನ ಹಾಗೆ ನಮ್ಮನು ಸೇರಿ ಎಂದಿಗು ಹೀಗೆ ನಗುತಲಿ ಒಂದಾಗಿ ನೀನಿರಬೇಕು ನಿನ್ನ ನೆರಳಲಿ ನಾವಿರಬೇಕು ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ... ಸಾವಿರ ನದಿಗಳು ಸೇರಿದರೇನು ಸಾಗರಕೆ ಸಮನಾಗುವುದೇನು ಶತಕೋಟಿ ದೇವರು ಹರಸಿದರೇನು ಅಮ್ಮನ ಹರಕೆಗೆ ಸರಿಸಾಟಿಯೇನು ತಾಯಿಗೆ ಆನಂದ ತಂದರೆ ಸಾಕು ಬೇರು ಪೂಜೆ ಏತಕೆ ಬೇಕು ಅಮ್ಮ ನೀನು ನಮಗಾಗಿ ಸಾವಿರ ವರುಷ ಸುಖವಾಗಿ...

ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ

ಚಿತ್ರ : ಭಲೇಜೋಡಿ ರಚನೆ: ಚಿ.ಉದಯಶಂಕರ್ ಸಂಗೀತ: ಆರ್. ರತ್ನ ಹಿನ್ನಲೆ ಗಾಯನ: ಡಾ.ಪಿ.ಬಿ.ಶ್ರೀನಿವಾಸ್ ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ ನಾ ಅಮ್ಮ ಎಂದಾಗ ಏನು ಸಂತೋಷವು ನಿನ್ನ ಕಂಡಾಗ ಮನಕೇನು ಆನಂದವು ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ .. ಹಾಲಿನ ಸುಧೆಯು ನಿನ್ನಯ ಮನಸು ಜೇನಿನ ಸವಿಯು ನಿನ್ನ ಮಾತು.. ಪುಣ್ಯದ ಫಲವೊ ದೇವರ ವರವೊ ಸೇವೆಯ ಭಾಗ್ಯ ನನ್ನದಾಯ್ತು ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ .. ತಾಯಿಯ ಮಮತೆ ಕಂಡ ದೇವನು ಅಡಗಿದ ಎಲ್ಲೊ ಮರೆಯಾಗಿ ತಾಯಿಯ ಶಾಂತಿಗೆ ಧರಣಿಯು ನಾಚಿ ಮೌನದಿ ನಿಂತಳು ತಲೆಬಾಗಿ ಅಮ್ಮ... ಅಮ್ಮ .... ಅಮ್ಮ ... ನನ್ನಮ್ಮ ..

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು

ಚಿತ್ರ: ಕಪ್ಪು ಬಿಳುಪು ಸಾಹಿತ್ಯ : ಆರ್.ಎನ್. ಜಯಗೋಪಾಲ್ ಸಂಗೀತ : ಆರ್. ರತ್ನ ಹಿನ್ನಲೆ ಗಾಯನ : ಪಿ.ಸುಶೀಲ ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು ನಿನ್ನ ಸಂಗ ಆಡಲೆಂದು ಬಂದೆ ನಾನು ಓಹೋ...ಓಹೋ........... ಸಣ್ಣ ಸಣ್ಣ ಹೂವಿನಲ್ಲೂ ಕಂಡೆ ನೀನು ಬಣ್ಣದ ಬಣ್ಣದ ಚಿಟ್ಟೆಯಲ್ಲೂ ನೀನೆ ನೀನು ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು... ನೀನು ಇತ್ತ ಹಣ್ಣುಗಳೆ ಅನ್ನ ನನಗೆ ನಿನ್ನ ಮಡಿಲಿನಲೇ ನನ್ನ ಹಾಸಿಗೆ ಬೀಸಿ ಬಂದ ಗಾಳಿಯಲ್ಲೂ ನಿನ್ನ ಮಾಯೆ ಹರಿಯುವ ನದಿಯಲೂ ನಿನ್ನ ಛಾಯೆ ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು... ಊರುಬೇಡ ಕೇರಿಬೇಡ ಯಾರೂ ಬೇಡಾ ಅಮ್ಮ ಒಮ್ಮೆ ಕಣ್ಣ ಬಿಟ್ಟು ನನ್ನ ನೋಡಾ ತಾಯಿತಂದೆ ಬಂಧುಬಳಗ ನೀನೇ ಎಲ್ಲಾ ನಿನಗಿಂತ ಬೇರೆ ದೇವರಿಲ್ಲಾ ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು...