ಮೂಕ ಹಕ್ಕಿಯು ಹಾಡುತಿದೆ
ಚಿತ್ರ:ಧರ್ಮಸೆರೆ ರಚನೆ: ವಿಜಯನಾರಸಿಂಹ ಸಂಗೀತ: ಉಪೇಂದ್ರ ಕುಮಾರ್ ಹಿನ್ನಲೆ ಗಾಯನ: ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಎಸ್.ಜಾನಕಿ ಮೂಕ ಹಕ್ಕಿಯು ಹಾಡುತಿದೆ ಹಾಡುತಿದೆ ಹಾಡುತಿದೆ ಹಾಡುತಿದೆ ಭಾಷೆಗೂ ನಿಲುಕದ ಭಾವಗೀತೆಯ ಸಾರಿ ಸಾರಿ ಹಾಡುತಿದೆ ಸಖನೊಡಗೂಡೀ ಸುಖವನು ಕಾಣೋ ಸುಂದರ ಸ್ವಪ್ನವ ಕಂಡು ಹಿಗ್ಗಿ ಹಿಗ್ಗುತಾ ಹಾರುತಲಿರಲು ಹಕ್ಕಿಯ ರೆಕ್ಕೆ ಮುರಿದಿತ್ತು.. ಮೂಕ ಹಕ್ಕಿಯು ಹಾಡುತಿದೆ... ತಂಪಿನ ನೆರಳೆ ಬೆಂಕಿಯ ಕಾರಿತು ಹಕ್ಕಿಯು ವಿಲವಿಲ ಒದ್ದಾಡಿತು ನಾನಾ ಬಗೆಯ ವಿಷ ಬಾಣಗಳು ಹಕ್ಕಿಯ ಒಡಲಿಗೆ ನಾಟಿತ್ತು ವೇದನೆಯಲ್ಲಿ ತತ್ತರಿಸುತ್ತಾ ತವರಿಗೆ ಹಕ್ಕಿ ಮರಳಿತ್ತು ತನ್ನ ತವರಿಗೆ ಹಕ್ಕಿ ಮರಳಿತು ಮರಳಿತು ಮರಳಿತು ಮರಳಿತು ಒಂದೆಡೆ ತಾಯಾಗೋ ಹರುಷದ ಹಸಿರು ಇನ್ನೊಂದೆಡೆ ಚೀತ್ಕಾರದ ಬಿಸಿ ಉಸಿರು ಉಸಿರು ಒಂದೆಡೆ ತಾಯಾಗೋ ಹರುಷದ ಹಸಿರು ಇನ್ನೊಂದೆಡೆ ಚೀತ್ಕಾರದ ಬಿಸಿ ಉಸಿರು ಉಸಿರು ಸಂಕಟದಾ ಸುಳಿದಾಳಿಗೆ ಹಕ್ಕಿ ಸುತ್ತಿ ಸುತ್ತಿತು ಸುತ್ತಿ ಸುತ್ತಿ ಸುತ್ತಿತು ಮೂಕ ಹಕ್ಕಿಯು ಹಾಡುತಿದೆ...