Posts

Showing posts from August, 2008

ನೀ ಹೀಂಗ ನೋಡಬ್ಯಾಡ ನನ್ನ

ರಚನೆ : ಡಾ.ದ.ರಾ.ಬೇಂದ್ರೆ ಸಂಗೀತ: ಎಂ.ರಂಗರಾವ್ ಹಿನ್ನಲೆ ಗಾಯನ: ರಾಜಕುಮಾರ್ ಭಾರತಿ ನೀ ಹೀಂಗ ನೋಡಬ್ಯಾಡ ನನ್ನ ನೀ ಹೀಂಗ ನೋಡಿದರೆ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ದಾರೀಲಿ ನೆನೆದ ಕೈ ಹಿಡಿದೆ ನೀನು ತಣ್ಣsಗ ಅಂತ ತಿಳಿದು ಬಿಡವೊಲ್ಲಿ ಇನ್ನುನೂ ಬೂದಿಮುಚ್ಚಿದ ಕೆಂಡ ಇದಂತ ಹೊಳೆದು ಮುಗಿಲಿನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs ಆ ಗಾದಿ ಮಾತು ನಂಬಿ ನಾನು ದೇವರಂತ ತಿಳಿದಿಯೇನ ನೀ ನನ್ನ ನೀ ಹೀಂಗ ನೋಡಬ್ಯಾಡ ನನ್ನ... ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಾoಟಿಯಾ ಹಣ್ಣು ಹೊಳೆ ಹೊಳೆವ ಹಾಂಗಿರುವ ಕಣ್ಣಿರುವ ಹೆಣ್ಣ ಹೇಳು ನಿನ್ನವೇನ ಈ ಕಣ್ಣು ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ ನೀ ಹೀಂಗ ನೋಡಬ್ಯಾಡ ನನ್ನ... ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು ನಡ ನಡಕ ಹುಚ್ಚನಗಿ ಯಾಕ ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡದ್ಹಾಂಗೆ ಗಾಳಿಯ ನೆವಕ ಅತ್ತಾರೆ ಅತ್ತುಬಿಡು ಹೊನಲು ಬರಲಿ ನಕ್ಯಾಕೆ ಮರಸತೀ ದು:ಖ ಎವೆಬಡಿಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿಕಚ್ಚಿ ಹಿಡಿಯದಿರು ಬಿಕ್ಕ ನೀ ಹೀಂಗ ನೋಡಬ್ಯಾಡ ನನ್ನ...

ಶ್ರಾವಣ ಮಾಸ ಬಂದಾಗ ಆನಂದ ತಂದಾಗ

ಚಿತ್ರ: ಶ್ರಾವಣ ಬಂತು ರಚನೆ: ಚಿ.ಉದಯಶಂಕರ್ ಸಂಗೀತ: ಎಂ.ರಂಗರಾವ್ ಹಿನ್ನಲೆ ಗಾಯನ: ಡಾ. ರಾಜ್ ಕುಮಾರ್ ಮತ್ತು ವಾಣಿ ಜಯರಾಮ್ ಶ್ರಾವಣ ಮಾಸ ಬಂದಾಗ ಆನಂದ ತಂದಾಗ ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ ನೀ ನನ್ನ ಜೊತೆಯಾಗಿ ಇರುವಾಗ ಹಿತವಾಗಿ ಬಿಸಿಲೆಲ್ಲ ತಂಪಾಗಿ ಬೆಳದಿಂಗಳಂತಾಗಿ ಮಾತೆಲ್ಲ ಹಾಡಾಗಿ ಆ ಹಾಡು ಇಂಪಾಗಿ ಯುಗವೊಂದು ದಿನವಾಗಿ ಕ್ಷಣವಾಗಿ ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ ಶ್ರಾವಣ ಮಾಸ ಬಂದಾಗ ಆನಂದ ತಂದಾಗ... ಮುಗಿಲೆಲ್ಲ ಕಪ್ಪಾಗಿ ಮಿಂಚಿಂದ ಬೆಳಕಾಗಿ ಗುಡುಗಿಂದ ಸದ್ದಾಗಿ ಮಳೆಬಂದು ತಂಪಾಗಿ ಸಂತೋಷ ಹೆಚ್ಚಾಗಿ ನವಿಲೊಂದು ಹುಚ್ಚಾಗಿ ಕುಣಿದಾಗ ಸೊಗಸಾಗಿ ನಮಗಾಗ ಚಳಿಯಾಗಿ ವಿರಹ ಗೀತೆ ಇನ್ನಿಲ್ಲ ಪ್ರಣಯ ಗೀತೆ ಬಾಳೆಲ್ಲ ಶ್ರಾವಣ ಮಾಸ ಬಂದಾಗ ಆನಂದ ತಂದಾಗ...

ಮನಸ ಹೇಳ ಬಯಸಿದೆ... ನೂರೊಂದು

ಚಿತ್ರ: ಬೀಗರ ಪಂದ್ಯ ರಚನೆ: ಆರ್.ಎನ್. ಜಯಗೋಪಾಲ್ ಸಂಗೀತ: ರಮೇಶ್ ನಾಯ್ಡು ಹಿನ್ನಲೆ ಗಾಯನ: ಪಿ.ಸುಶೀಲ ಮನಸ ಹೇಳ ಬಯಸಿದೆ... ನೂರೊಂದು ತುಟಿಯ ಮೇಲೆ ಬಾರದಿದೆ... ಮಾತೊಂದು ನೆನಪು ನೂರು ಎದೆಯಲಿ... ಅಗಲಿಕೆಯ ನೋವಲಿ ವಿದಾಯ ಗೆಳೆಯನೇ... ವಿದಾಯ ಗೆಳತಿಯೇ ವಿದಾಯ ಹೇಳ ಬಂದಿರುವೇ... ನಾನಿಂದು ಹಗಲು ರಾತ್ರಿ... ಹಕ್ಕಿಯ ಹಾಗೇ... ಹಾರಿ ಮೆರೆದೆವು ನಗು ಎನ್ನುವ ಅಲೆಯ ಮೇಲೆ ತೇಲಿ ನಲಿದೆವು ಹೃದಯಗಳಾ... ಬೆಸುಗೆಯಾಗಿ ಸ್ನೇಹ ಬಂಧ ಅಮರವಾಗಿ ನಾಳೆ ಎನ್ನುವ ಚಿಂತೆ ಮರೆತು ಹಾಡಿ ಕುಣಿದೆವು ಆ ಕಾಲ ಕಳೆದಿದೆ... ದೂರಾಗೋ ಸಮಯದೇ ವಿದಾಯ ಹೇಳ ಬಂದಿರುವೇ... ನಾನಿಂದು ಮನಸ ಹೇಳ ಬಯಸಿದೆ... ನೂರೊಂದು ನೀನು ಬೇರೆ... ನಾನು ಬೇರೆ... ಹೇಗೋ ಬೆರೆತೆವು ನಮ್ಮ ನಮ್ಮ ಒಪ್ಪು ತಪ್ಪು... ಎಲ್ಲಾ ಅರಿತೆವು ಈ ದಿನವ ಮರೆಯಬೇಡ ನಮ್ಮ ಸ್ನೇಹ ತೊರೆಯಬೇಡ ದಾರಿ ಬೇರೆ ಆದರೇನು... ಪ್ರೀತಿ ಉಳಿಯಲಿ ನಾನೆಲ್ಲೆ ಇದ್ದರೂ... ನೀ ಹೇಗೆ ಇದ್ದರೂ ನೀ ನಾಳೆ ಕೇಳಬೇಡ.. ನನ್ನ ಯಾರೆಂದು