Posts

Showing posts from July, 2010

ಒಲಿದ ಜೀವ ಜೊತೆಯಲಿರಲು ಬಾಳು ಸುಂದರ

ಚಿತ್ರ:ಬೆಂಕಿಯ ಬಲೆ ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್-ನಾಗೇಂದ್ರ ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಎಸ್.ಜಾನಕಿ ಒಲಿದ ಜೀವ ಜೊತೆಯಲಿರಲು ಬಾಳು ಸುಂದರ ಭವ್ಯವಾದ ಪ್ರೇಮ ಮಂದಿರ ನಯನ ನಯನ ಬೆರೆತ ಸಮಯ ಬಾನಲ್ಲಿ ತೇಲಾಡಿದಂತೆ ನಯನ ನಯನ ಬೆರೆತ ಸಮಯ ಬಾನಲ್ಲಿ ತೇಲಾಡಿದಂತೆ ಕರವ ಹಿಡಿದಾಗ ನಗುತ ನಡೆವಾಗ ಭುವಿಯೇ ಸ್ವರ್ಗದಂತೆ ಸನಿಹ ಕುಳಿತು ನುಡಿವ ನುಡಿಯು ಇಂಪಾದ ಹಾಡಿನಂತೆ ಸನಿಹ ಕುಳಿತು ನುಡಿವ ನುಡಿಯು ಇಂಪಾದ ಹಾಡಿನಂತೆ ಕನಸು ಕಣ್ಣಲ್ಲಿ ಸೊಗಸು ಎದುರಲ್ಲಿ ಬದುಕು ಕವಿತೆಯಂತೆ ಕಣ್ಣೀರು ಪನ್ನೀರ ಹನಿಯಂತೆ ಒಲಿದ ಜೀವ ಜೊತೆಯಲಿರಲು ಬಾಳು ಸುಂದರ... ಉರಿವ ಬಿಸಿಲ ಸುರಿವ ರವಿಯೇ ತಂಪಾದ ಚಂದ್ರನಂತೆ ಉರಿವ ಬಿಸಿಲ ಸುರಿವ ರವಿಯೇ ತಂಪಾದ ಚಂದ್ರನಂತೆ ತುಳಿದ ಮುಳ್ಳೆಲ್ಲ ಅರಳಿ ಹೂವಂತೆ ಹಾದಿ ಮಿಟ್ಟಿಯಂತೆ ಮೊಗದಿ ಹರಿವ ಬೆವರ ಹನಿಯು ಓಂದೊಂದು ಮುತ್ತಿನಂತೆ ಮೊಗದಿ ಹರಿವ ಬೆವರ ಹನಿಯು ಓಂದೊಂದು ಮುತ್ತಿನಂತೆ ಏನೊ ಉಲ್ಲಾಸ ಏನೊ ಸಂತೋಷ ಮರೆತು ಎಲ್ಲ ಚಿಂತೆ ಒಲವಿಂದ ದಿನವೊಂದು ಕ್ಷಣವಂತೆ ಒಲಿದ ಜೀವ ಜೊತೆಯಲಿರಲು ಬಾಳು ಸುಂದರ...