ಈ ಗುಲಾಬಿಯು ನಿನಗಾಗಿ...
ಚಿತ್ರ: ಮುಳ್ಳಿನ ಗುಲಾಬಿ ಸಂಗೀತ: ಸತ್ಯಂ ಹಿನ್ನಲೆ ಗಾಯನ:ಎಸ್.ಪಿ ಈ ಗುಲಾಬಿಯು ನಿನಗಾಗಿ ಇದು ಚೆಲ್ಲುವ ಪರಿಮಳ ನಿನಗಾಗಿ ಈ ಹೂವಿನಂದ ಪ್ರೇಯಸಿ ನಿನಗಾಗೆ ಕೇಳೆ ಪ್ರೇಯಸಿ ನಿನಗಾಗೆ ಕೇಳೆ ಓ ರತಿ ನನ್ನೀ ಕಣ್ಣಲಿ ಕಾತರವೇನು ನಿನ್ನನು ಕಾಣುವ ಆತುರವೇನು ನನ್ನೀ ಕಣ್ಣಲಿ ಕಾತರವೇನು ನಿನ್ನನು ಕಾಣುವ ಆತುರವೇನು ಆತುರ ತರುವಾ ವೇದನೆಯೇನು ಜೀವದ ಜೀವವು ಪ್ರಿಯತಮೆ ನೀನು ಈ ಗುಲಾಬಿಯು ನಿನಗಾಗಿ... ನೀರನು ತೊರೆದರೆ ಕಮಲಕೆ ಸಾವು ಹೂವನು ಮರೆತರೆ ದುಂಬಿಗೆ ಸಾವು ನೀರನು ತೊರೆದರೆ ಕಮಲಕೆ ಸಾವು ಹೂವನು ಮರೆತರೆ ದುಂಬಿಗೆ ಸಾವು.. ಕಾಣದೆ ಹೋದರೆ ಅರೆಕ್ಷಣ ನಿನ್ನ ಮರುಕ್ಷಣ ಪ್ರಿಯತಮೆ ನನ್ನ ಸಾವು ಈ ಗುಲಾಬಿಯು ನಿನಗಾಗಿ...