Posts

Showing posts from November, 2009

ಇದು ರಾಮ ಮಂದಿರ

ಚಿತ್ರ: ರವಿಚಂದ್ರ ಗೀತರಚನೆ: ಚಿ.ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಹಿನ್ನಲೆ ಗಾಯನ: ಡಾ. ರಾಜ್ ಕುಮಾರ್ ಇದು ರಾಮ ಮಂದಿರ ನೀ ರಾಮ ಚಂದಿರ ಜೊತೆಯಾಗಿ ನೀ ಇರಲು ಬಾಳ ಸಹಜ ಸುಂದರ ಇದು ರಾಮ ಮಂದಿರ... ಸ್ವಾಮಿ ನಿನ್ನ ಕಣ್‌ಗಳಲಿ, ಚಂದ್ರೋದಯ ಕಾಣುವೆ ಸ್ವಾಮಿ ನಿನ್ನ ನಗುವಲಿ, ಅರುಣೋದಯ ನೋಡುವೆ ಸರಸದಲ್ಲಿ ಚತುರ ಚತುರ, ನಿನ್ನ ಸ್ನೇಹ ಅಮರ ನಿನ್ನ ಬಾಳ ಕಮಲದಲಿ, ನಾನು ನಲಿವ ಭ್ರಮರ ಇದು ರಾಮ ಮಂದಿರ... ನನ್ನ ಸೀತೆ ಇರುವ ತಾಣ, ಕ್ಷೀರ ಸಾಗರದಂತೆ ನನ್ನ ಸೀತೆ ಬೆರೆತ ಮನವು, ಹೊನ್ನ ಹೂವಿನಂತೆ ನುಡಿವ ಮಾತು ಮಧುರ ಮಧುರ, ನುಡಿವ ಮಾತು ಮಧುರ ಮಧುರ ನಿನ್ನ ಪ್ರೇಮ ಅಮರ ನೀನು ಹೃದಯ ತುಂಬಿರಲು, ಬಾಳು ಪ್ರೇಮ ಮಂದಿರ ಇದು ರಾಮ ಮಂದಿರ, ಆನಂದ ಸಾಗರ ಜೊತೆಯಾಗಿ ನೀ ಇರಲು, ಬಾಳು ಸಹಜ ಸುಂದರ