Posts

Showing posts from February, 2009

ಶಿವಪ್ಪ ಕಾಯೋ ತಂದೆ...

ಚಿತ್ರ: ಬೇಡರ ಕಣ್ಣಪ್ಪ ರಚನೆ: ಎಸ್. ನಂಜಪ್ಪ ಸಂಗೀತ: ಆರ್. ಸುದರ್ಶನಂ ಹಿನ್ನಲೆ ಗಾಯಕರು : ಶ್ರೀ ಸಿ ಎಸ್ ಜಯರಾಮನ್ ಶರಣು ಶಂಕರ ಶಂಭೋ ಓಂಕಾರನಾದ ರೂಪಾ ಮೊರೆಯ ನೀ ಆಲಿಸೀ ಪಾಲಿಸೋ ಸರ್ವೇಶಾ ಶಿವಪ್ಪ ಕಾಯೋ ತಂದೆ ಮೂರುಲೋಕ ಸ್ವಾಮಿ ದೇವಾ ಹಸಿವೆಯನ್ನು ತಾಳಲಾರೆ ಕಾಪಾಡೆಯ ಹರನೇ ಕಾಪಾಡೆಯಾ ಭಕ್ತಿಯಂತೆ ಪೂಜೆಯಂತೆ ಒಂದೂ ಅರಿಯೆ ನಾ ಪಾಪವಂತೆ ಪುಣ್ಯವಂತೆ ಕಾಣೆನಯ್ಯ ನಾ.. ಹರನೇ ಶಿವಪ್ಪ ಕಾಯೋ ತಂದೆ... ಶುದ್ಧನಾಗಿ ಪೂಜೆಗೈವೆ ಒಲಿವೆಯಂತೆ ನೀ ಶುದ್ಧವೋ ಅಶುದ್ಧವೋ ನಾ ಕಾಣೆ ದೇವನೇ ಶಿವಪ್ಪ ಕಾಯೋ ತಂದೆ... ನಾದವಂತೆ ವೇದವಂತೆ ಒಂದು ತಿಳಿಯೇ ನಾ ಬೆಂದ ಜೀವ ನೊಂದು ಕೂಗೆ ಬಂದು ನೋಡೆಯಾ ಹರನೇ ಶಿವಪ್ಪ ಕಾಯೋ ತಂದೆ... ಏಕಚಿತ್ತದಿ ನಂಬಿದವರ ನೀ ಸಾಕಿ ಸಲಹುವೆ ಎಂತಪ್ಪಾ ಶೋಕವ ಹರಿಸುವ ದೇವ ನೀನಾದರೆ ಬೇಟೆಯ ತೋರೋ ಎನ್ನಪ್ಪಾ ಲೋಕವನಾಳುವ ನೀನಪ್ಪಾ ಶಿವಪ್ಪ ಕಾಯೋ ತಂದೆ...