ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ
ಚಿತ್ರ: ದೇವರಗುಡಿ ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ರಾಜನ್-ನಾಗೇಂದ್ರ ಹಿನ್ನಲೆ ಗಾಯನ: ಎಸ್.ಪಿ ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ ನಲಿಯುತ ಬಾಳುವ ಮನೆಗೇ ಹೆಣ್ಣೇ ಭೂಷಣ ಸುಖಸಂಸಾರಕೆ ಎಂದೂ ಸತಿಯೇ ಕಾರಣ ಬಾನಿಗೆ ಎಂದೆಂದಿಗೂ ಆ ರವಿಯೇ ಭೂಷಣ ಬಳುಕುವಾ ಲತೆಗೆ ಹೆಣ್ಣಿನಾ ಮುಡಿಗೆ ಹೂವೇ ಭೂಷಣ ರಜನಿಗೆ ಎಂದೆಂದಿಗೂ ಆ ಶಶಿಯೇ ಭೂಷಣ ಅರಳಿದಾ ಮನಕೆ ಹವಳದಾ ತುಟಿಗೆ ನಗುವೇ ಭೂಷಣ ನೋವಿಗೇ ...ನಲಿವಿಗೇ....ಹೆಣ್ಣೇ ಕಾರಣ.... ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ... ಮದುವೆಯು ಅನುಬಂಧವು ಎಂದೂ ಅಳಿಯದು ಕೋಪದಾ ಕಿಡಿಗೆ ರೋಷದಾ ಉರಿಗೆ ಒಲವೂ ಬಾಡದೂ ದೇಹವು ದೂರಾದರೂ ಮನಸೂ ಮರೆಯದು ಬೆರೆತಿಹಾ ಜೀವ ವಿರಹದಾ ನೋವ ಎಂದೂ ಸಹಿಸದೂ ಒಲವಿನಾ...ಜೀವನಾ...ಸುಖಕೇ ಸಾಧನಾ... ಚೆಲುವೆಯ ಅಂದದ ಮೊಗಕೇ ಕಣ್ಣೇ ಭೂಷಣ...