Posts

Showing posts from July, 2007

ಎಲ್ಲಿಗೇ ಪಯಣ ಯಾವುದೋ ದಾರಿ ಏಕಾಂಗಿ ಸಂಚಾರಿ

ಚಿತ್ರ: ಸಿಪಾಯಿ ರಾಮು ರಚನೆ: ಆರ್.ಎನ್. ಜಯಗೋಪಾಲ್ ಸಂಗೀತ: ಉಪೇಂದ್ರ ಕುಮಾರ್ ಹಿನ್ನಲೆ ಗಾಯನ: ಪಿ.ಬಿ. ಶ್ರೀನಿವಾಸ್ ಕಥೆ ಮುಗಿಯಿತೇ ಆರಂಭದ ಮುನ್ನ ಲತೆ ಬಾಡಿ ಹೋಯಿತೆ ಹೂವಾಗುವ ಮುನ್ನ ಎಲ್ಲಿಗೇ ಪಯಣ ಯಾವುದೋ ದಾರಿ ಏಕಾಂಗಿ ಸಂಚಾರಿ ಏಕಾಂಗಿ ಸಂಚಾರಿ ಮಡದಿ ಮಕ್ಕಳು ಸ್ನೇಹಿತರನ್ನು ಮಣ್ಣಿನ ವಶ ಮಾಡಿ ನಡೆದಿಹೆ ಇಂದು ಅಂಧನ ರೀತಿ ಶೋಕದೇ ಏನೋ ನಿನ್ನ ಗುರಿ ಎಲ್ಲಿಗೇ ಪಯಣ ಸೋಲು ಗೆಲುವು ಸಾವು ನೋವು ಜೀವನದುಯ್ಯಾಲೆ ಸಾಯುವ ಮುನ್ನ ಜನಿಸಿದ ಮಣ್ಣಾ ದರುಶನ ನೀ ಪಡೆದು ತಾಯಿಯ ಮಡಿಲ ಧೂಳಲಿ ಬೆರೆತು ಶೂನ್ಯದೇ ಮುಗಿಸು ನಿನ್ನ ಕಥೆ ಎಲ್ಲಿಗೇ ಪಯಣ ಯಾವುದೋ ದಾರಿ ಏಕಾಂಗಿ ಸಂಚಾರಿ ಏಕಾಂಗಿ ಸಂಚಾರಿ ಏಕಾಂಗಿ ಸಂಚಾರಿ.

ನಿನಗಾಗಿ ಓಡೋಡಿ ಬಂದೆ

Image
ಚಿತ್ರ: ಸನಾದಿ ಅಪ್ಪಣ್ಣ ರಚನೆ: ಚಿ.ಉದಯಶಂಕರ್ ಸಂಗೀತ: ಜಿ. ಕೆ. ವೆಂಕಟೇಶ್ ಹಿನ್ನಲೆ ಗಾಯನ: ಡಾ. ರಾಜ್ ಕುಮಾರ್ > ನಿನಗಾಗಿ ಓಡೋಡಿ ಬಂದೆ ನಾನು ಕಾಣದೆ ಹೀಗೇಕೆ ಮರೆಯಾಗಿ ಹೋದೆ ಮರೆಯಾಗಿ ಹೋದೆ ನೀನು ನಿನಗಾಗಿ ಓಡೋಡಿ ಬಂದೆ ತಣ್ಣನೆ ಗಾಳಿ ಬೀಸಿದ ಹಾಗೆ ಬಾಳಲಿ ಬಂದೆ ಸಂತಸ ತಂದೆ ಕಣ್ಣಿಗೆ ಮಿಂಚು ಕಾಣುವ ಹಾಗೆ ಬಾಳಿನ ಬಾನಲಿ ಬೆಳಕನು ತಂದೆ ಸ್ನೇಹದಿ ಸೇರಿ ಮೋಹವ ತೋರಿ ಸನಿಹಕೆ ಸಾರಿ ಮನವನು ಸೇರಿ ಏಕೆ ನೀ ಮರೆಯಾದೆ ನಿನಗಾಗಿ ಓಡೋಡಿ ಬಂದೆ... ಬಿಸಿಲಿಗೆ ಹೂವು ಬಾಡುವ ಹಾಗೆ ಕಾಣದಿ ನೊಂದೆ ವಿರಹದಿ ಬೆಂದೆ ಮುಳ್ಳಿನ ಬಲೆಯ ಇಳಿಯಂತಾಗಿ ಅಳುಕಿದೆ ಮನವು ನಡುಗಿದೆ ತನುವು ತೀರದ ನೋವ ತಾಳದು ಜೀವ ಕಾಣದೆ ನೀನು ಉಳಿಯನು ನಾನು ಏಕೆ ನೀ ದೂರಾದೆ... ದೂರಾದೆ.... ನಿನಗಾಗಿ ಓಡೋಡಿ ಬಂದೆ...

ಎದೆಯು ಮರಳಿ ತೊಳಲುತಿದೆ

ರಚನೆ: ಗೋಪಾಲಕೃಷ್ಣ ಅಡಿಗ ಎದೆಯು ಮರಳಿ ತೊಳಲುತಿದೆ, ದೊರೆಯುದದನೆ ಹುಡುಕುತಿದೆ; ಅತ್ತ ಇತ್ತ ದಿಕ್ಕುಗೆಟ್ಟು ಬಳ್ಳಿ ಬಾಳು ಚಾಚುತಿದೆ ತನ್ನ ಕುಡಿಯನು. ಸಿಗಲಾರದ ಆಸರಕೆ ಕಾದ ಕಾವ ಬೇಸರಕೆ ಮಿಡುಕಿ ದುಡುಕಲೆಳಸುತಿದೆ ತನ್ನ ಗಡಿಯನು. ಎದೆಯು ಮರಳಿ ತೊಳಲುತಿದೆ... ಅದಕು ಇದಕು ಅಂಗಲಾಚಿ ತನ್ನೊಲವಿಗೆ ತಾನೆ ನಾಚಿ ದಡವ ಮುಟ್ಟಿ ಮುಟ್ಟದೊಲು ಹಿಂದೆಗೆಯುವ ವೀಚಿ ವೀಚಿ ಮುರುಟದಲಿದೆ ಮನದಲಿ ! ಎದೆಯು ಮರಳಿ ತೊಳಲುತಿದೆ... ನೀರದಗಳ ದೂರತೀರ ಕರೆಯುತಲಿದೆ ಎದೆಯ ನೀರ, ಮೀರುತಲಿದೆ ಹೃದಯಭಾರ ತಾಳಲೆಂತು ನಾ ? ಎದೆಯು ಮರಳಿ ತೊಳಲುತಿದೆ... ಯಾವ ಬಲವು ಯಾವ ಒಲವು ಕಾಯಬೇಕೋ ಅದರ ಹೊಳವು ಕಾಣದೆ ದಳ್ಳಿಸಲು ಮನವು ಬಾಳಲೆಂತು ನಾ ? ಎದೆಯು ಮರಳಿ ತೊಳಲುತಿದೆ...