ಬಂದೇ ಬರತಾವ ಕಾಲಾ
ಚಿತ್ರ: ಸ್ಪಂದನ ರಚನೆ: ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ ಸಂಗೀತ: ರಾಜನ್ ನಾಗೇಂದ್ರ ಹಿನ್ನಲೆ ಗಾಯನ: ಪಿ.ಸುಶೀಲ ಬಂದೇ ಬರತಾವ ಕಾಲಾ ಬಂದೇ ಬರತಾವ ಕಾಲಾ ಮಂದಾರ ಕನಸನು ಕಂಡಂತ ಮನಸನು ಒಂದು ಮಾಡುವ ಸ್ನೇಹ ಜಾಲಾ ಮಾಗಿಯ ಎದೆ ತೂರಿ ಕೂಗಿತೊ ಕೋಕಿಲ ರಾಗದ ಚಂದಕೆ ಬಾಗಿತೊ ಬನವೆಲ್ಲ ತೂಗುತ ಬಳ್ಳಿ ಮೈಯನ್ನ ಸಾಗದು ಬಾಳು ಏಕಾಕಿ ಎನುತಾವ ಬಂದೇ ಬರತಾವ ಕಾಲಾ... ಹುಣ್ಣಿಮೆ ಭಾನಿಂದ ತಣ್ಣನೆ ಸವಿ ಹಾಲು ಚೆಲ್ಲುತ ಮೆಲ್ಲನೆ ನಲಿಸಿದೆ ಬುವಿಯನು ಮುಸುಕಿದೆ ಮಾಯೆ ಜಗವನು ಭುವಿ ಭಾನು ಸೇರಿ ಹರಸಾವು ಬಾಳನು ಬಂದೇ ಬರತಾವ ಕಾಲಾ...